Thursday, April 26, 2012
Sunday, April 8, 2012
ಕನ್ನಡ ಸರಳೀಕರಣ
ಋಕಾರವೇತಕೆ ನಮಗೆ
ಬರೆಯುವೆವು ರುಷಿ
ಶಷಗಳೆರಡೂ ಒಂದೆಮಗೆ
ಷಕಾರವೇತಕೆ ನಮಗೆ
ಒತ್ತಿ ಹೇಳಲು ಕಠಿಣ
ಅಡಿವೊತ್ತು ತೆಗೆಯೋಣ
ಉಸಿರಲಿಲ್ಲ್ಲ ತ್ರಾಣ
ಕಿತ್ತುಬಿಡಿ ಮಹಾಪ್ರಾಣ
ಅಲ್ಲಿಗೆ ಆಗುವುದು
ಕನ್ನಡವು ಅಲ್ಪಪ್ರಾಣ
ಮುಂದಣ ಸರಳೀಕರಣ
ಭಾಷೆಯೇ ಗತಪ್ರಾಣ !
ಬರೆಯುವೆವು ರುಷಿ
ಶಷಗಳೆರಡೂ ಒಂದೆಮಗೆ
ಷಕಾರವೇತಕೆ ನಮಗೆ
ಒತ್ತಿ ಹೇಳಲು ಕಠಿಣ
ಅಡಿವೊತ್ತು ತೆಗೆಯೋಣ
ಉಸಿರಲಿಲ್ಲ್ಲ ತ್ರಾಣ
ಕಿತ್ತುಬಿಡಿ ಮಹಾಪ್ರಾಣ
ಅಲ್ಲಿಗೆ ಆಗುವುದು
ಕನ್ನಡವು ಅಲ್ಪಪ್ರಾಣ
ಮುಂದಣ ಸರಳೀಕರಣ
ಭಾಷೆಯೇ ಗತಪ್ರಾಣ !
Saturday, April 7, 2012
ಕೋತಿ - ಪೆನ್ನು
ಸುಮ್ಮನಿದ್ದ ಕೋತಿ ಕೈಗೆ
ಸಿಕ್ಕಿತೊಂದು ಪೆನ್ನು
ಏನೂ ಮಾಡಲರಿಯದೆ
ಚುಚ್ಚಿತಿನ್ನೊಂದರ ಬೆನ್ನು
ಗಾಯಗೊಂಡ ಕೋತಿ ಚೀರಿ
ಕರೆಯಿತದರ ಬಳಗ
ಹೀಗೆ ಶುರುವಾಯಿತಂದು
ಬಳಗದೊಳಗೆ ಜಗಳ
ಕೋತಿಜಗಳದಿಂದ ವನದಿ
ಶಾಂತಿಗಾಯ್ತು ಕುತ್ತು
ಇತರ ಜೀವಿಗಳಿಗಿದಾಯ್ತು
ನುಂಗಲಾರದ ತುತ್ತು
ಖ್ಗಡ್ಗಕಿಂತ ಪೆನ್ನು ಹರಿತ
ಎಂಬ ಮಾತು ಸತ್ಯ
ಕೋತಿಜಗಳಕಿಂತ ಬೇಕೆ
ಬೇರೆ ಸಾಕ್ಷಿ ನಿತ್ಯ!
ಸಿಕ್ಕಿತೊಂದು ಪೆನ್ನು
ಏನೂ ಮಾಡಲರಿಯದೆ
ಚುಚ್ಚಿತಿನ್ನೊಂದರ ಬೆನ್ನು
ಗಾಯಗೊಂಡ ಕೋತಿ ಚೀರಿ
ಕರೆಯಿತದರ ಬಳಗ
ಹೀಗೆ ಶುರುವಾಯಿತಂದು
ಬಳಗದೊಳಗೆ ಜಗಳ
ಕೋತಿಜಗಳದಿಂದ ವನದಿ
ಶಾಂತಿಗಾಯ್ತು ಕುತ್ತು
ಇತರ ಜೀವಿಗಳಿಗಿದಾಯ್ತು
ನುಂಗಲಾರದ ತುತ್ತು
ಖ್ಗಡ್ಗಕಿಂತ ಪೆನ್ನು ಹರಿತ
ಎಂಬ ಮಾತು ಸತ್ಯ
ಕೋತಿಜಗಳಕಿಂತ ಬೇಕೆ
ಬೇರೆ ಸಾಕ್ಷಿ ನಿತ್ಯ!
ಮಹಾಯತಿ..
ಹಿಂದೊಮ್ಮೆ ಇದ್ದರೊಬ್ಬರು ಮಹಾಯತಿ
ಸಾರುತ ಜಗದಗಲಕೆ ಭಾರತ ಸಂಸ್ಕೃತಿ
ಅದಕೆಲ ಜನರಿಂದು ಗೈಯ್ದರು ವಿಕೃತಿ
ಮರೆಯುತ ಯತಿ ಮಾಡಿದ ಸುಕೃತಿ
ಕೆಲಜನರೆಂದರು ನಮದೇ ಜಾತಿ
ಯತಿಯದು ನಮದೇ ಆಹಾರದ ಪದ್ಧತಿ
ಕೆಲಜನ ಜರೆದರು ನಿಮದಾಯ್ತು ಅತಿ
ಯತಿಯ ಗೌರವಕಾಯ್ತಿಂದು ಚ್ಯುತಿ
ಸಿದ್ದಾಂತಗಳಿಗಾಯ್ತು ಬೀದಿಯೆ ಗತಿ
ಈ ಜನಕೇಕೋ ಈ ತರ ಮನಸ್ಥಿತಿ
ಮಾಡುವ ಇತರರ ಮನಸಿನ ವಿಕೃತಿ
ದೇವಾ ಹರಸೆಲ್ಲರನೂ ನೀಡುತ ಸನ್ಮತಿ
ಸಾರುತ ಜಗದಗಲಕೆ ಭಾರತ ಸಂಸ್ಕೃತಿ
ಅದಕೆಲ ಜನರಿಂದು ಗೈಯ್ದರು ವಿಕೃತಿ
ಮರೆಯುತ ಯತಿ ಮಾಡಿದ ಸುಕೃತಿ
ಕೆಲಜನರೆಂದರು ನಮದೇ ಜಾತಿ
ಯತಿಯದು ನಮದೇ ಆಹಾರದ ಪದ್ಧತಿ
ಕೆಲಜನ ಜರೆದರು ನಿಮದಾಯ್ತು ಅತಿ
ಯತಿಯ ಗೌರವಕಾಯ್ತಿಂದು ಚ್ಯುತಿ
ಸಿದ್ದಾಂತಗಳಿಗಾಯ್ತು ಬೀದಿಯೆ ಗತಿ
ಈ ಜನಕೇಕೋ ಈ ತರ ಮನಸ್ಥಿತಿ
ಮಾಡುವ ಇತರರ ಮನಸಿನ ವಿಕೃತಿ
ದೇವಾ ಹರಸೆಲ್ಲರನೂ ನೀಡುತ ಸನ್ಮತಿ
ಅಂತೆಕಂತೆಗಳ ಸಂತೆ...
ನಮ್ಮೂರಲಿ ರಸ್ತೆ ಅಗಲೀಕರಣವಂತೆ
ಮಾಡುವರು ಕಾರ್ಮಿಕರು ಬಿಟ್ಟು ತಮ್ಮೆಲ್ಲ ಚಿಂತೆ
ಫಲಕದಲಿ ಮೂತಿಗಳು ಪುಡಾರಿಗಳದಂತೆ
ಹಾಕಿರುವ ತೆರಿಗೆಹಣ ತಮದೇ ಎನುವಂತೆ
ದೇಶವದು ಭಾರತವು ಜಾತ್ಯತೀತವಂತೆ
ಮಾಡುವರು ಕಾನೂನು ಜಾತಿಗೆಗೊಂದರಂತೆ
ದಾಖಲೆಯಲಿ ಜಾತಿಯದು ಬೇಕೇ ಬೇಕಂತೆ
ಪುಡಾರಿಗಳಿಗಿದು ಮತ ಬ್ಯಾಂಕಿನಂತೆ
ಅನೇಕತೆಯಲಿ ಏಕತೆಯ ಸಂಕೇತವಂತೆ
ಸಕಲ ಭಾಷೆಗಳು ಇಲ್ಲಿ ಮಾನ್ಯವಂತೆ
ಹೇರುವರು ಹಿಂದಿಯನು ತಲೆಯ ಮೇಲಂತೆ
ಬೇರೆ ಭಾಷೆಗಳು ಎದ್ದೇಳದಂತೆ
ಪ್ರಧಾನಿಯನು ಕೊಂದವರು ತಮಿಳುಗ್ರರಂತೆ
ಇವರಿಗವಶ್ಯಕವು ನೇಣುಗಂಬವಂತೆ
ಮುಗ್ಧ ಜನರನು ಕೊಂದ ಜಿಹಾದಿಗಳನು
ಸಾಕುತಿಹರು ಇವರು ಅತಿಥಿಗಳಂತೆ
ಭಾರತವು ಬಡಾ ಬಡ ದೇಶವಂತೆ
ಪುಡಾರಿಗಳಿಗಿಲ್ಲ ಇದರ ಈ ಚಿಂತೆ
ಪೇರಿಪರು ಬ್ಯಾಂಕಿನೊಳು ನೋಟುಗಳ ಕಂತೆ
ತಮ್ಮ ಕಾಯವನು ಇದರಲೇ ಸುಡುವರಂತೆ
ಅಂತೆ ಕಂತೆಗಳಲ್ಲಿ ಕಳೆದಿರುವುದಂತೆ
ಜನಸಾಮಾನ್ಯನಾ ಜೀವನದ ಚಿಂತೆ
ಇವೆಲ್ಲ್ಲ ತಮಗೆ ಅನ್ವಯಿಸದಂತೆ
ಚಾಟಿ ಏಟಿನಾ ರುಚಿಗೆ ಎತ್ತೆಳೆಯುವಂತೆ
ಮಾಡುವರು ಕಾರ್ಮಿಕರು ಬಿಟ್ಟು ತಮ್ಮೆಲ್ಲ ಚಿಂತೆ
ಫಲಕದಲಿ ಮೂತಿಗಳು ಪುಡಾರಿಗಳದಂತೆ
ಹಾಕಿರುವ ತೆರಿಗೆಹಣ ತಮದೇ ಎನುವಂತೆ
ದೇಶವದು ಭಾರತವು ಜಾತ್ಯತೀತವಂತೆ
ಮಾಡುವರು ಕಾನೂನು ಜಾತಿಗೆಗೊಂದರಂತೆ
ದಾಖಲೆಯಲಿ ಜಾತಿಯದು ಬೇಕೇ ಬೇಕಂತೆ
ಪುಡಾರಿಗಳಿಗಿದು ಮತ ಬ್ಯಾಂಕಿನಂತೆ
ಅನೇಕತೆಯಲಿ ಏಕತೆಯ ಸಂಕೇತವಂತೆ
ಸಕಲ ಭಾಷೆಗಳು ಇಲ್ಲಿ ಮಾನ್ಯವಂತೆ
ಹೇರುವರು ಹಿಂದಿಯನು ತಲೆಯ ಮೇಲಂತೆ
ಬೇರೆ ಭಾಷೆಗಳು ಎದ್ದೇಳದಂತೆ
ಪ್ರಧಾನಿಯನು ಕೊಂದವರು ತಮಿಳುಗ್ರರಂತೆ
ಇವರಿಗವಶ್ಯಕವು ನೇಣುಗಂಬವಂತೆ
ಮುಗ್ಧ ಜನರನು ಕೊಂದ ಜಿಹಾದಿಗಳನು
ಸಾಕುತಿಹರು ಇವರು ಅತಿಥಿಗಳಂತೆ
ಭಾರತವು ಬಡಾ ಬಡ ದೇಶವಂತೆ
ಪುಡಾರಿಗಳಿಗಿಲ್ಲ ಇದರ ಈ ಚಿಂತೆ
ಪೇರಿಪರು ಬ್ಯಾಂಕಿನೊಳು ನೋಟುಗಳ ಕಂತೆ
ತಮ್ಮ ಕಾಯವನು ಇದರಲೇ ಸುಡುವರಂತೆ
ಅಂತೆ ಕಂತೆಗಳಲ್ಲಿ ಕಳೆದಿರುವುದಂತೆ
ಜನಸಾಮಾನ್ಯನಾ ಜೀವನದ ಚಿಂತೆ
ಇವೆಲ್ಲ್ಲ ತಮಗೆ ಅನ್ವಯಿಸದಂತೆ
ಚಾಟಿ ಏಟಿನಾ ರುಚಿಗೆ ಎತ್ತೆಳೆಯುವಂತೆ
ಗಣಪನ ಹಬ್ಬ
ಮಾನ್ಯ ತಿಲಕರು ಅಂದು
ಮಾಡಿದರು ಗಣಪನ ಹಬ್ಬ
ಮಾಡಲು ಜನ ಕ್ರೋಢೀಕರಣ
ಕೆಲವು ಜನರು ಇಂದು
ಮಾಡುವರು ಗಣಪನ ಹಬ್ಬ
ಮಾಡಲು ಹಣ ಕ್ರೋಢೀಕರಣ
ಮಾಡಿದರು ಗಣಪನ ಹಬ್ಬ
ಮಾಡಲು ಜನ ಕ್ರೋಢೀಕರಣ
ಕೆಲವು ಜನರು ಇಂದು
ಮಾಡುವರು ಗಣಪನ ಹಬ್ಬ
ಮಾಡಲು ಹಣ ಕ್ರೋಢೀಕರಣ
ಧರ್ಮಯುದ್ಧ...
ಭೀಕರ ಸ್ಪೋಟ
ಗುಂಡುಗಳ ಆರ್ಭಟ
ಗಹಗಹಿಸಿ ನಕ್ಕ
ಮುಸುಕುಧಾರಿಯೊಬ್ಬ
ಹೇಳಿದ
ನಮ್ಮದು ಧರ್ಮಯುದ್ಧ!
ಮುಸುಕು ಸರಿಸಿ
ಮನೆಮುಂದೆ ಬಂದಾಗ
ಸೇರಿದೆ ಜನಜಂಗುಳಿ
ಏನು ಎಂದು ಕೇಳಿದ
ಜಿಹಾದಿಗಳ ಧರ್ಮಯುದ್ಧದಲಿ
ಮಡಿದರು ನಿನ್ನಮ್ಮ ತಂಗಿಯರು
ಎಂದು ಉಸುರಿದನೊಬ್ಬ!
ಗುಂಡುಗಳ ಆರ್ಭಟ
ಗಹಗಹಿಸಿ ನಕ್ಕ
ಮುಸುಕುಧಾರಿಯೊಬ್ಬ
ಹೇಳಿದ
ನಮ್ಮದು ಧರ್ಮಯುದ್ಧ!
ಮುಸುಕು ಸರಿಸಿ
ಮನೆಮುಂದೆ ಬಂದಾಗ
ಸೇರಿದೆ ಜನಜಂಗುಳಿ
ಏನು ಎಂದು ಕೇಳಿದ
ಜಿಹಾದಿಗಳ ಧರ್ಮಯುದ್ಧದಲಿ
ಮಡಿದರು ನಿನ್ನಮ್ಮ ತಂಗಿಯರು
ಎಂದು ಉಸುರಿದನೊಬ್ಬ!
ಕನ್ನಡಿ
ಓ ನನ್ನ ಒಡನಾಡಿ
ಕೇಳು ನನ್ನದೊಂದು ನುಡಿ
ಇದೊಂದು ಜೀವನಕೆ ಮುನ್ನುಡಿ
ನಾನೊಂದು ಕನ್ನಡಿ
ನಾನೊಂದು ಕನ್ನಡಿ
ನೀ ಬಳಿ ಬಂದರೆ ನಾನೂ ಬರುವೆ
ನೀ ದೂರಾದರೆ ನಾ ದೂರಾಗುವೆ
ನೀ ನಕ್ಕರೆ ನಾನೂ ನಗುವೆ
ನೀ ಜರೆದರೆ ನಾನೂ ಜರೆಯುವೆ
ನೀ ಅತ್ತರೆ ನಾನೂ ಅಳುವೆ
ಆದರೆ
ನೀ ಹೊಡೆದರೆ ನಾನು ಒಡೆಯುವೆ
ನಿನಗೆಂದೆಂದೂ ಸಿಗದಂತೆ.. !
ಕೇಳು ನನ್ನದೊಂದು ನುಡಿ
ಇದೊಂದು ಜೀವನಕೆ ಮುನ್ನುಡಿ
ನಾನೊಂದು ಕನ್ನಡಿ
ನಾನೊಂದು ಕನ್ನಡಿ
ನೀ ಬಳಿ ಬಂದರೆ ನಾನೂ ಬರುವೆ
ನೀ ದೂರಾದರೆ ನಾ ದೂರಾಗುವೆ
ನೀ ನಕ್ಕರೆ ನಾನೂ ನಗುವೆ
ನೀ ಜರೆದರೆ ನಾನೂ ಜರೆಯುವೆ
ನೀ ಅತ್ತರೆ ನಾನೂ ಅಳುವೆ
ಆದರೆ
ನೀ ಹೊಡೆದರೆ ನಾನು ಒಡೆಯುವೆ
ನಿನಗೆಂದೆಂದೂ ಸಿಗದಂತೆ.. !
ಇತಿಹಾಸಕೊಂದು ಇತಿಶ್ರೀ....
ಕಾಲಗರ್ಭದ ಒಳಗೆ
ಸಮಾಧಿಯಾಗಲು ಹೊರಟ
ಭೂತಕಾಲದ ಶವವ
ಮತ್ತೆ ಮತ್ತೆ ಕೆದಕುತ್ತಿರುವ
ಓ ನೀಚ ಜಂತುಗಳೇ
ನಿಮಗಿದೋ ಎಚ್ಚರಿಕೆ!
ಇದು ಸತ್ಯವ ತಿಂದು ಹಿಕ್ಕೆ ಹಾಕಿದ
ಕ್ಷುದ್ರ ಜಂತುಗಳ ತಾಣ
ಜಾತಿ ವರ್ಣಗಳ ವೇಷದಿ ಕಚ್ಚಾಡಿದ
ಹುಳ ಹುಪ್ಪಟೆಗಳ ಆವಾಸ ಸ್ಥಾನ
ಸಾಮರಸ್ಯವ ಕಲಕಿ ಜಗಕೆ
ದುರ್ಗಂಧ ಬೀರಿದ ತಾಣ
ನಿಮಗಿದೋ ಎಚ್ಚರಿಕೆ !
ಕೊಳೆತಿರುವ ಶವವ ಮತ್ತೆ ಕಬಳಿಸಬರುವ
ಬುದ್ದ್ಧಿಜೀವಿಗಳೆಂಬ ರಣ ಹದ್ದುಗಳಿವೆ
ಧರ್ಮಗುರುಗಳ ವೇಷದಿ
ಅರಾಜಕತೆಯೆಬ್ಬಿಸುವ ಕತ್ತೆಕಿರುಬಗಳಿವೆ
ತಿರುಚಿ ನರ್ತನಗೈವ
ರಾಜಕೀಯ ಪಿಶಾಚಿಗಳಿವೆ
ದುರ್ಗಂಧ ಪಸರಿಸುವ
ಸುದ್ದಿವಾಹಕಗಳ ನೀಚವ್ಯವಸ್ಥೆಯಿದೆ
ನಿಮಗಿದೋ ಎಚ್ಚರಿಕೆ !
ಸಮಾಧಿಯಾಗಿಹ ಶವಕೆ
ಮತ್ತೆ ಗಟ್ಟಿ ಮಣ್ಣನು ಮುಚ್ಚಿ
ಸಾಮರಸ್ಯದ ಬೀಜಗಳನು ಬಿತ್ತಿ
ಮಾನವತೆಯ ಹೂಗಳನು ಅರಳಿಸಿ
ಏಕತೆಯ ಸೌಗಂಧವ ಪಸರಿಸಿ
ಸಾಕಾರಗೊಳಿಸಿ ಮಾನವ ಬದುಕನು
ಜೀವನದಿ ಅನವರತ!
ಸಮಾಧಿಯಾಗಲು ಹೊರಟ
ಭೂತಕಾಲದ ಶವವ
ಮತ್ತೆ ಮತ್ತೆ ಕೆದಕುತ್ತಿರುವ
ಓ ನೀಚ ಜಂತುಗಳೇ
ನಿಮಗಿದೋ ಎಚ್ಚರಿಕೆ!
ಇದು ಸತ್ಯವ ತಿಂದು ಹಿಕ್ಕೆ ಹಾಕಿದ
ಕ್ಷುದ್ರ ಜಂತುಗಳ ತಾಣ
ಜಾತಿ ವರ್ಣಗಳ ವೇಷದಿ ಕಚ್ಚಾಡಿದ
ಹುಳ ಹುಪ್ಪಟೆಗಳ ಆವಾಸ ಸ್ಥಾನ
ಸಾಮರಸ್ಯವ ಕಲಕಿ ಜಗಕೆ
ದುರ್ಗಂಧ ಬೀರಿದ ತಾಣ
ನಿಮಗಿದೋ ಎಚ್ಚರಿಕೆ !
ಕೊಳೆತಿರುವ ಶವವ ಮತ್ತೆ ಕಬಳಿಸಬರುವ
ಬುದ್ದ್ಧಿಜೀವಿಗಳೆಂಬ ರಣ ಹದ್ದುಗಳಿವೆ
ಧರ್ಮಗುರುಗಳ ವೇಷದಿ
ಅರಾಜಕತೆಯೆಬ್ಬಿಸುವ ಕತ್ತೆಕಿರುಬಗಳಿವೆ
ತಿರುಚಿ ನರ್ತನಗೈವ
ರಾಜಕೀಯ ಪಿಶಾಚಿಗಳಿವೆ
ದುರ್ಗಂಧ ಪಸರಿಸುವ
ಸುದ್ದಿವಾಹಕಗಳ ನೀಚವ್ಯವಸ್ಥೆಯಿದೆ
ನಿಮಗಿದೋ ಎಚ್ಚರಿಕೆ !
ಸಮಾಧಿಯಾಗಿಹ ಶವಕೆ
ಮತ್ತೆ ಗಟ್ಟಿ ಮಣ್ಣನು ಮುಚ್ಚಿ
ಸಾಮರಸ್ಯದ ಬೀಜಗಳನು ಬಿತ್ತಿ
ಮಾನವತೆಯ ಹೂಗಳನು ಅರಳಿಸಿ
ಏಕತೆಯ ಸೌಗಂಧವ ಪಸರಿಸಿ
ಸಾಕಾರಗೊಳಿಸಿ ಮಾನವ ಬದುಕನು
ಜೀವನದಿ ಅನವರತ!
ಆಟೋ...
ಕೇಳಿದೆ ಆಟೋದವನನ್ನು
ಬರುವಿಯಾ ಎಂದು...
ಅಂದನವನು
ಅತ್ತ ಕಡೆ ಟ್ರಾಫಿಕ್ಕು, ಇತ್ತಕಡೆ ಇಕ್ಕಟ್ಟು
ಆಗುವುದು ದರ ದುಪ್ಪಟ್ಟು...
ದಿನಾ ಇದೇ ನಮಗೆ ಕಿರಿಕ್ಕು!
ಕೇಳಿದೆ ಆಟೋದವನನ್ನು
ಬರುವಿಯಾ ಎಂದು...
ಅಂದನವನು
ಅತ್ತ ಏಕಮುಖ ಸಂಚಾರ, ಇತ್ತ ಬರೀಸುತ್ತು ವಿಹಾರ
ಆಗುವುದು ದರ ದುಪ್ಪಟ್ಟು...
ಓಡುವುದಿಲ್ಲವೇ ಮೀಟರು
ಹೊಡೆದರೊಂದು ಸುತ್ತು?
ಕೇಳಿದೆ ಆಟೋದವನನ್ನು
ಬರುವಿಯಾ ಎಂದು...
ಅಂದನವನು
ಅತ್ತ ಬರಿಕಲ್ಲು, ಇತ್ತ ಕಡೆ ಹೊಂಡ
ಆಗುವುದು ದರ ದುಪ್ಪಟ್ಟು...
ಹಾಕಲಾದೀತೆ? ಇವನು
ಹೋಗುವ ಕಡೆ ಕಾಂಕ್ರೀಟು?
ಕೇಳಿದೆ ಆಟೋದವನನ್ನು
ಬರುವಿಯಾ ಎಂದು...
ಅಂದನವನು
ಅತ್ತ ಕಡೆ ಒಳಗೆ, ಇತ್ತ ಬಾಡಿಗೆ ಸಿಗದು
ಆಗುವುದು ದರ ದುಪ್ಪಟ್ಟು...
ಹುಡುಕಿ ಕೊಡಲಾದೀತೆ?
ಇತ್ತಕಡೆ ಪ್ರಯಾಣಿಕನನ್ನು?
ಕೇಳಿದೆ ಆಟೋದವನನ್ನು
ಅಸ್ಪತ್ರೆಗೆ ತಡವಾಗುವುದೆಂದು...
ಅಂದನವನು
ಇಂತಹವರೆ ದಿನಾ ನಮಗೆ
ಪ್ರಯಾಣಿಕರು.. ನೀವು ಹೊರತೇ?
ಆಗುವುದು ದರ ದುಪ್ಪಟ್ಟು...
ಇವರಿಗಿಲ್ಲವೇ?
ಮಾನವೀಯತೆಯ ಚೌಕಟ್ತು?
(ಪ್ರಾಮಾಣಿಕ ಆಟೋಚಾಲಕರ ಕ್ಷಮೆಕೋರಿ...)
ಬರುವಿಯಾ ಎಂದು...
ಅಂದನವನು
ಅತ್ತ ಕಡೆ ಟ್ರಾಫಿಕ್ಕು, ಇತ್ತಕಡೆ ಇಕ್ಕಟ್ಟು
ಆಗುವುದು ದರ ದುಪ್ಪಟ್ಟು...
ದಿನಾ ಇದೇ ನಮಗೆ ಕಿರಿಕ್ಕು!
ಕೇಳಿದೆ ಆಟೋದವನನ್ನು
ಬರುವಿಯಾ ಎಂದು...
ಅಂದನವನು
ಅತ್ತ ಏಕಮುಖ ಸಂಚಾರ, ಇತ್ತ ಬರೀಸುತ್ತು ವಿಹಾರ
ಆಗುವುದು ದರ ದುಪ್ಪಟ್ಟು...
ಓಡುವುದಿಲ್ಲವೇ ಮೀಟರು
ಹೊಡೆದರೊಂದು ಸುತ್ತು?
ಕೇಳಿದೆ ಆಟೋದವನನ್ನು
ಬರುವಿಯಾ ಎಂದು...
ಅಂದನವನು
ಅತ್ತ ಬರಿಕಲ್ಲು, ಇತ್ತ ಕಡೆ ಹೊಂಡ
ಆಗುವುದು ದರ ದುಪ್ಪಟ್ಟು...
ಹಾಕಲಾದೀತೆ? ಇವನು
ಹೋಗುವ ಕಡೆ ಕಾಂಕ್ರೀಟು?
ಕೇಳಿದೆ ಆಟೋದವನನ್ನು
ಬರುವಿಯಾ ಎಂದು...
ಅಂದನವನು
ಅತ್ತ ಕಡೆ ಒಳಗೆ, ಇತ್ತ ಬಾಡಿಗೆ ಸಿಗದು
ಆಗುವುದು ದರ ದುಪ್ಪಟ್ಟು...
ಹುಡುಕಿ ಕೊಡಲಾದೀತೆ?
ಇತ್ತಕಡೆ ಪ್ರಯಾಣಿಕನನ್ನು?
ಕೇಳಿದೆ ಆಟೋದವನನ್ನು
ಅಸ್ಪತ್ರೆಗೆ ತಡವಾಗುವುದೆಂದು...
ಅಂದನವನು
ಇಂತಹವರೆ ದಿನಾ ನಮಗೆ
ಪ್ರಯಾಣಿಕರು.. ನೀವು ಹೊರತೇ?
ಆಗುವುದು ದರ ದುಪ್ಪಟ್ಟು...
ಇವರಿಗಿಲ್ಲವೇ?
ಮಾನವೀಯತೆಯ ಚೌಕಟ್ತು?
(ಪ್ರಾಮಾಣಿಕ ಆಟೋಚಾಲಕರ ಕ್ಷಮೆಕೋರಿ...)
ತಳಮಳ
ಪ್ರಿಯೆ
ನಿನ್ನೆ ಹೂಬನದಿ
ನೀ ಕೊಟ್ಟ ಮುತ್ತು
ಅಲ್ಲಿದ್ದ ನಿನ್ನಪ್ಪನ
ಕಣ್ಣಿಗೆ ಬಿತ್ತು
ಇದಾಗ ಬಹುದೇ
ನಮ್ಮ ಪ್ರೀತಿಗೆ
ಆಪತ್ತು?
: ))))))))
ನಿನ್ನೆ ಹೂಬನದಿ
ನೀ ಕೊಟ್ಟ ಮುತ್ತು
ಅಲ್ಲಿದ್ದ ನಿನ್ನಪ್ಪನ
ಕಣ್ಣಿಗೆ ಬಿತ್ತು
ಇದಾಗ ಬಹುದೇ
ನಮ್ಮ ಪ್ರೀತಿಗೆ
ಆಪತ್ತು?
: ))))))))
ಹೃದಯ ದರ್ಪಣ
ಪ್ರಿಯೆ
ನನ್ನ ಪ್ರೀತಿಗೆ
ನೀನಿತ್ತ ತರ್ಪಣ
ಚೂರು ಚೂರಾಗಿದೆ
ಹೃದಯ ದರ್ಪಣ
ಬಿದ್ದಿರುವ
ಚೂರು ಚೂರುಗಳಲ್ಲೂ
ನನ್ನ ಪ್ರೀತಿಯದೇ
ಪ್ರತಿಫಲನ!
ನನ್ನ ಪ್ರೀತಿಗೆ
ನೀನಿತ್ತ ತರ್ಪಣ
ಚೂರು ಚೂರಾಗಿದೆ
ಹೃದಯ ದರ್ಪಣ
ಬಿದ್ದಿರುವ
ಚೂರು ಚೂರುಗಳಲ್ಲೂ
ನನ್ನ ಪ್ರೀತಿಯದೇ
ಪ್ರತಿಫಲನ!
Subscribe to:
Posts (Atom)










