ದೃಶ್ಯಕಾವ್ಯ
Thursday, April 26, 2012
Sunday, April 8, 2012
ಕನ್ನಡ ಸರಳೀಕರಣ
ಋಕಾರವೇತಕೆ ನಮಗೆ
ಬರೆಯುವೆವು ರುಷಿ
ಶಷಗಳೆರಡೂ ಒಂದೆಮಗೆ
ಷಕಾರವೇತಕೆ ನಮಗೆ
ಒತ್ತಿ ಹೇಳಲು ಕಠಿಣ
ಅಡಿವೊತ್ತು ತೆಗೆಯೋಣ
ಉಸಿರಲಿಲ್ಲ್ಲ ತ್ರಾಣ
ಕಿತ್ತುಬಿಡಿ ಮಹಾಪ್ರಾಣ
ಅಲ್ಲಿಗೆ ಆಗುವುದು
ಕನ್ನಡವು ಅಲ್ಪಪ್ರಾಣ
ಮುಂದಣ ಸರಳೀಕರಣ
ಭಾಷೆಯೇ ಗತಪ್ರಾಣ !
ಬರೆಯುವೆವು ರುಷಿ
ಶಷಗಳೆರಡೂ ಒಂದೆಮಗೆ
ಷಕಾರವೇತಕೆ ನಮಗೆ
ಒತ್ತಿ ಹೇಳಲು ಕಠಿಣ
ಅಡಿವೊತ್ತು ತೆಗೆಯೋಣ
ಉಸಿರಲಿಲ್ಲ್ಲ ತ್ರಾಣ
ಕಿತ್ತುಬಿಡಿ ಮಹಾಪ್ರಾಣ
ಅಲ್ಲಿಗೆ ಆಗುವುದು
ಕನ್ನಡವು ಅಲ್ಪಪ್ರಾಣ
ಮುಂದಣ ಸರಳೀಕರಣ
ಭಾಷೆಯೇ ಗತಪ್ರಾಣ !
Saturday, April 7, 2012
ಕೋತಿ - ಪೆನ್ನು
ಸುಮ್ಮನಿದ್ದ ಕೋತಿ ಕೈಗೆ
ಸಿಕ್ಕಿತೊಂದು ಪೆನ್ನು
ಏನೂ ಮಾಡಲರಿಯದೆ
ಚುಚ್ಚಿತಿನ್ನೊಂದರ ಬೆನ್ನು
ಗಾಯಗೊಂಡ ಕೋತಿ ಚೀರಿ
ಕರೆಯಿತದರ ಬಳಗ
ಹೀಗೆ ಶುರುವಾಯಿತಂದು
ಬಳಗದೊಳಗೆ ಜಗಳ
ಕೋತಿಜಗಳದಿಂದ ವನದಿ
ಶಾಂತಿಗಾಯ್ತು ಕುತ್ತು
ಇತರ ಜೀವಿಗಳಿಗಿದಾಯ್ತು
ನುಂಗಲಾರದ ತುತ್ತು
ಖ್ಗಡ್ಗಕಿಂತ ಪೆನ್ನು ಹರಿತ
ಎಂಬ ಮಾತು ಸತ್ಯ
ಕೋತಿಜಗಳಕಿಂತ ಬೇಕೆ
ಬೇರೆ ಸಾಕ್ಷಿ ನಿತ್ಯ!
ಸಿಕ್ಕಿತೊಂದು ಪೆನ್ನು
ಏನೂ ಮಾಡಲರಿಯದೆ
ಚುಚ್ಚಿತಿನ್ನೊಂದರ ಬೆನ್ನು
ಗಾಯಗೊಂಡ ಕೋತಿ ಚೀರಿ
ಕರೆಯಿತದರ ಬಳಗ
ಹೀಗೆ ಶುರುವಾಯಿತಂದು
ಬಳಗದೊಳಗೆ ಜಗಳ
ಕೋತಿಜಗಳದಿಂದ ವನದಿ
ಶಾಂತಿಗಾಯ್ತು ಕುತ್ತು
ಇತರ ಜೀವಿಗಳಿಗಿದಾಯ್ತು
ನುಂಗಲಾರದ ತುತ್ತು
ಖ್ಗಡ್ಗಕಿಂತ ಪೆನ್ನು ಹರಿತ
ಎಂಬ ಮಾತು ಸತ್ಯ
ಕೋತಿಜಗಳಕಿಂತ ಬೇಕೆ
ಬೇರೆ ಸಾಕ್ಷಿ ನಿತ್ಯ!
ಮಹಾಯತಿ..
ಹಿಂದೊಮ್ಮೆ ಇದ್ದರೊಬ್ಬರು ಮಹಾಯತಿ
ಸಾರುತ ಜಗದಗಲಕೆ ಭಾರತ ಸಂಸ್ಕೃತಿ
ಅದಕೆಲ ಜನರಿಂದು ಗೈಯ್ದರು ವಿಕೃತಿ
ಮರೆಯುತ ಯತಿ ಮಾಡಿದ ಸುಕೃತಿ
ಕೆಲಜನರೆಂದರು ನಮದೇ ಜಾತಿ
ಯತಿಯದು ನಮದೇ ಆಹಾರದ ಪದ್ಧತಿ
ಕೆಲಜನ ಜರೆದರು ನಿಮದಾಯ್ತು ಅತಿ
ಯತಿಯ ಗೌರವಕಾಯ್ತಿಂದು ಚ್ಯುತಿ
ಸಿದ್ದಾಂತಗಳಿಗಾಯ್ತು ಬೀದಿಯೆ ಗತಿ
ಈ ಜನಕೇಕೋ ಈ ತರ ಮನಸ್ಥಿತಿ
ಮಾಡುವ ಇತರರ ಮನಸಿನ ವಿಕೃತಿ
ದೇವಾ ಹರಸೆಲ್ಲರನೂ ನೀಡುತ ಸನ್ಮತಿ
ಸಾರುತ ಜಗದಗಲಕೆ ಭಾರತ ಸಂಸ್ಕೃತಿ
ಅದಕೆಲ ಜನರಿಂದು ಗೈಯ್ದರು ವಿಕೃತಿ
ಮರೆಯುತ ಯತಿ ಮಾಡಿದ ಸುಕೃತಿ
ಕೆಲಜನರೆಂದರು ನಮದೇ ಜಾತಿ
ಯತಿಯದು ನಮದೇ ಆಹಾರದ ಪದ್ಧತಿ
ಕೆಲಜನ ಜರೆದರು ನಿಮದಾಯ್ತು ಅತಿ
ಯತಿಯ ಗೌರವಕಾಯ್ತಿಂದು ಚ್ಯುತಿ
ಸಿದ್ದಾಂತಗಳಿಗಾಯ್ತು ಬೀದಿಯೆ ಗತಿ
ಈ ಜನಕೇಕೋ ಈ ತರ ಮನಸ್ಥಿತಿ
ಮಾಡುವ ಇತರರ ಮನಸಿನ ವಿಕೃತಿ
ದೇವಾ ಹರಸೆಲ್ಲರನೂ ನೀಡುತ ಸನ್ಮತಿ
Subscribe to:
Posts (Atom)



